Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

‘ನಷ್ಟದಲ್ಲಿದ್ದ KMF ಲಾಭಕ್ಕೆ ತಂದಿದ್ದು ರೇವಣ್ಣ.. ಅದ್ಕೆ ಅವ್ರರನ್ನ ಮಿಲ್ಕ್​ ಮ್ಯಾನ್​ ಅಂತಾರೆ’

Blog-post Thumbnail

ಬೆಂಗಳೂರು: ರೇವಣ್ಣ ಕೆಎಂಎಫ್​ನಲ್ಲಿ ಭ್ರಷ್ಟಾಚಾರ ಮುಕ್ತ ಆಡಳಿತ ಕೊಟ್ಡಿದ್ದಾರೆ. ನಷ್ಟದಲ್ಲಿದ್ದ ಸಂಸ್ಥೆಯನ್ನ ₹4 ಸಾವಿರ ಕೋಟಿ ಲಾಭಕ್ಕೆ ತಂದು ಸೂಪರ್ ಮಾರ್ಕೆಟ್ ಮಾಡಿದ್ರು. ಅದಕ್ಕೆ ಜನ ರೇವಣ್ಣರನ್ನ ಮಿಲ್ಕ್ ಮ್ಯಾನ್ ಅಂತ ಕರೆದ್ರು ಅಂತಾ ಮಾಜಿ ಪ್ರಧಾನಿ ಹೆಚ್​.ಡಿ.ದೇವೇಗೌಡ ಹೇಳಿದ್ದಾರೆ. ನಗರದ ಜೆಪಿ ಭವನದಲ್ಲಿ ಮಾತನಾಡಿದ ಅವರು, ಟ್ವಿಟರ್​ನಲ್ಲಿ ಕುಮಾರಸ್ವಾಮಿ ವಾಸ್ತವ ಅಂಶಗಳನ್ನೇ ಹೇಳಿದ್ದಾರೆ. ಸರ್ಕಾರ ಬೀಳಲು ಏನು ಕಾರಣ ಎಂಬುದು ಎಲ್ಲರಿಗೂ ಗೊತ್ತು. ಬಿಜೆಪಿ ಜೊತೆ ಹೋದವರ ಬಗ್ಗೆಯೂ ಗೊತ್ತು. ಸಿದ್ದರಾಮಯ್ಯ, ಅವರಪ್ಪನಾಣೆ ಕುಮಾರಸ್ವಾಮಿ ಸಿಎಂ ಆಗಲ್ಲ ಎಂದಿದ್ದರು ಹಾಗೆಯೇ ಪ್ರಚಾರ ಕೂಡಾ ಮಾಡಿದ್ದರು. ಕೊನೆಗೆ ಸಿದ್ದರಾಮಯ್ಯ ಬದಾಮಿ ಕ್ಷೇತ್ರಕ್ಕೆ ಹೋಗಿ ಗೆಲ್ಲಬೇಕಾಯ್ತು ಅಂತಾ ಟೀಕಿಸಿದರು. ಜೆಡಿಎಸ್‌ ಜೊತೆ ಮೈತ್ರಿ ಸರ್ಕಾರ ರಚನೆಗೆ ಕಾಂಗ್ರೆಸ್ ಹೈಕಮಾಂಡ್ ಸೂಚನೆ ನೀಡಿತ್ತು. ಹಾಗಾಗಿಯೇ ಅವರು ಒಪ್ಪಿಕೊಂಡಿದ್ದರು. ಅವರೇ ನಮ್ಮ ಮನೆಗೆ ಬಂದು ಮನವಿ ಮಾಡಿದ್ದರು. ಕೊನೆಗೆ ನಮಗೆ ಶಿಕ್ಷೆ ನೀಡಿದ್ರು. ಧರ್ಮಸ್ಥಳದ ಪ್ರಕೃತಿ ಚಿಕಿತ್ಸಾ ಕೇಂದ್ರದಲ್ಲಿ ಯಾಱರ ಜೊತೆ ಮಾತನಾಡಿದ್ದರು. ಏನೇನು ಮಾತನಾಡಿದ್ದರು ಎಂಬುದೆಲ್ಲವೂ ಗೊತ್ತಿದೆ. ಅಲ್ಲಿಂದ ಬಂದ ನಂತರ ಏನು ಮಾಡಿದ್ರು. ಮುಂದೆ ಏನಾಯಿತು ಎಂಬುದು ರಾಜ್ಯದ ಜನತೆಗೂ ಗೊತ್ತಿದೆ ಅಂತಾ ಸಿದ್ದರಾಮಯ್ಯ ವಿರುದ್ಧ ಹೆಚ್‌ಡಿಡಿ ವಾಗ್ದಾಳಿ ನಡೆಸಿದ್ರು.