Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

ಕಾರ್ಯಕರ್ತರ ಹಿತ ಕಾಪಾಡಲು ಬದುಕಿರುವೆ: ಎಚ್‌.ಡಿ.ದೇವೇಗೌಡ

Blog-post Thumbnail

ಯಾದಗಿರಿ: ‘ನಾನು ಹುಟ್ಟು ಹೋರಾಟಗಾರ, ಪಕ್ಷದ ಕಾರ್ಯಕರ್ತರ ಹಿತ ಕಾಪಾಡಲು ಬದುಕಿರುವೆ. ಅವರಿಗೆ ಏನೇ ಕಷ್ಟ ಬಂದರೂ ಪರಿಹರಿಸಲು ಹೋರಾಡುವೆ’ ಎಂದು ಜೆಡಿಎಸ್‌ ವರಿಷ್ಠ ಎಚ್‌.ಡಿ.ದೇವೇಗೌಡ ಹೇಳಿದರು. ಜಿಲ್ಲಾಧಿಕಾರಿ ಕಚೇರಿ ಎದುರು ಜೆಡಿಎಸ್‌ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರ ನೇತೃತ್ವದಲ್ಲಿ ಮೂರು ದಿನಗಳಿಂದ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಬುಧವಾರ ಪಾಲ್ಗೊಂಡು ಅವರು ಮಾತನಾಡಿದರು. ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರ ಜಿಲ್ಲಾ ಪ್ರವಾಸದ ವೇಳೆ ಪ್ರತಿಭಟನೆ ಮಾಡಿದ್ದನ್ನೇ ನೆಪವಾಗಿಸಿಕೊಂಡು ಜೆಡಿಎಸ್‌ ಕಾರ್ಯಕರ್ತರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ. ಪಕ್ಷದ ಕಾರ್ಯಕರ್ತ ಮಾರ್ಥಾಂಡ ಮಾನೆಗಾರ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದಾರೆ. ಪ್ರತಿಭಟನಾ ಸ್ಥಳದ ಸುತ್ತ 144 ಕಲಂ ನಿಷೇಧಾಜ್ಞೆ ಜಾರಿಗೊಳಿಸಿ, ಹೋರಾಟ ಹತ್ತಿಕ್ಕುವ ಪ್ರಯತ್ನ ನಡೆಸಿದ್ದಾರೆ’ ಎಂದು ಆರೋಪಿಸಿದರು. ಬಾಗಲಕೋಟೆ: ಪ್ರವಾಹದಿಂದ ಇಲ್ಲವೇ ಮಳೆ ನೀರು ನುಗ್ಗಿ ಎಷ್ಟೇ ಸಾವಿರ ಕೋಳಿಗಳು ಸತ್ತರೂ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ (ಎನ್‌ಡಿಆರ್‌ಎಫ್) ಮಾರ್ಗಸೂಚಿ ಅನ್ವಯ 100 ಕೋಳಿಗಳಿಗೆ ಮಾತ್ರ ಪರಿಹಾರ ಕೊಡಲು ಅವಕಾಶವಿದೆ. ಅದು ತಲಾ ಒಂದಕ್ಕೆ ₹50ರಂತೆ ₹5,000 ಮಾತ್ರ ಪರಿಹಾರ ಸಿಗಲಿದೆ. ಈ ಸಂಗತಿ ಬುಧವಾರ ಇಲ್ಲಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳ ನಡೆಸಿದ ನೆರೆ ಪರಿಹಾರ ಪ್ರಗತಿ ಪರಿಶೀಲನಾ ಸಭೆಯಲ್ಲಿ ಗಂಭೀರ ಚರ್ಚೆಗೆ ಗ್ರಾಸವಾಯಿತು. ಮುಧೋಳದ ಮಂಟೂರು ರಸ್ತೆಯಲ್ಲಿನ ಹಣಮಂತ ಉಳ್ಳಾಗಡ್ಡಿ ಅವರ ಕೋಳಿ ಫಾರಂಗೆ ಇತ್ತೀಚೆಗೆ ಹಳ್ಳದ ನೀರು ನುಗ್ಗಿ 4,480 ಕೋಳಿಗಳು ಸಾವಿಗೀಡಾಗಿವೆ. ಸಭೆಯಲ್ಲಿ ಈ ಸಂಗತಿ ಪ್ರಸ್ತಾಪಿಸಿದ ಕಾರಜೋಳ, ‘ಕೋಳಿಗಳು ಸೇರಿದಂತೆ ಜಾನುವಾರು ಸಾವಿಗೆ ಪರಿಹಾರ ನಿಗದಿಗೊಳಿಸುವಾಗ ತುಸು ಉದಾರವಾಗಿ ವರ್ತಿಸಿ’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ಈ ವೇಳೆ ತಮ್ಮ ಅಸಹಾಯಕತೆ ತೋಡಿಕೊಂಡ ಅಧಿಕಾರಿಗಳು, ಎನ್‌ಡಿಆರ್‌ಎಫ್ ನಿಯಮಾವಳಿಯನ್ನು ಸಭೆಯ ಗಮನಕ್ಕೆ ತಂದರು. ಆ ಲೆಕ್ಕದಲ್ಲಿ ಮುಧೋಳದ ಕೋಳಿ ಫಾರಂ ಮಾಲೀಕರಿಗೆ ಒಂದು ಕೋಳಿಗೆ ₹1.20ರಂತೆ ಪರಿಹಾರ ಸಿಗಲಿದೆ ಎಂಬುದು ಸಚಿವರ ಗಮನಕ್ಕೂ ಬಂತು.