Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

ಬಿರು ಬಿಸಿಲಿಗೂ ಡೋಂಟ್ ಕೇರ್.. ಪ್ರತಿಭಟನಾಕಾರರಿಗೆ ಆತ್ಮಸ್ಥೈರ್ಯ ತುಂಬಿದ ಮಾಜಿ ಪ್ರಧಾನಿ..!

Blog-post Thumbnail

ಯಾದಗಿರಿ: ನಗರದ ಪೊಲೀಸ್ ಠಾಣೆಯ ಎದುರು ಸತತ 3 ದಿನಗಳಿಂದ ಜೆಡಿಎಸ್​​ ಕಾರ್ಯಕರ್ತರು ಪ್ರತಿಭಟನೆ ನಡೆಸುತ್ತಿದ್ದಾರೆ. ಜೆಡಿಎಸ್​ ಯುವ ಘಟಕದ ಪ್ರಧಾನ ಕಾರ್ಯದರ್ಶಿ ಶರಣಗೌಡ ಕಂದಕೂರು ನೇತೃತ್ವದಲ್ಲಿ ಪಿಎಸ್​​ಐ ಬಾಪುಗೌಡ ಪಾಟೀಲ್ ಅಮಾನತಿಗೆ ಆಗ್ರಹಿಸಿ ಪ್ರತಿಭಟನೆ ನಡೆಸುತ್ತಿದ್ದಾರೆ.ಇಂದು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿರುವ ಮಾಜಿ ಪ್ರಧಾನಿ ದೇವೇಗೌಡರು, ಬಿರು ಬಿಸಿಲಿನಲ್ಲೇ ಧರಣಿ ಕುಳಿತು ಶರಣಗೌಡ ಕಂದಕೂರು ಜೊತೆ ಪ್ರತಿಭಟನೆ ಕುರಿತು ಚರ್ಚೆ ನಡೆಸಿದ್ದಾರೆ. ಈ ವೇಳೆ ಮಾತನಾಡಿದ ದೇವೇಗೌಡರು ಯಡಿಯೂರಪ್ಪ, ದ್ವೇಷದ ರಾಜಕಾರಣ ಮಾಡೋದಿಲ್ಲ ಅಂದಿದ್ದಾರೆ. ಆದರೆ ಮಾಡುತ್ತಿರುವುದು ದ್ವೇಷ ರಾಜಕಾರಣ ಅಲ್ಲದೇ ಮತ್ತೇನು? ವಿರೋಧ ಪಕ್ಷದ ಶಾಸಕರುಗಳ ಕ್ಷೇತ್ರಗಳಿಗೆ ಕುಮಾರಸ್ವಾಮಿ ನೀಡಿದ್ದ ಅನುದಾನದಲ್ಲಿ ಕಡಿತ ಮಾಡಿದ್ದಾರೆ. ಸಿಎಂಗೆ ಇದನ್ನು ಕೇಳಲು ಹೋದ ಜೆಡಿಎಸ್ ಕಾರ್ಯಕರ್ತರ ಮೇಲೆ ಯಾದಗಿರಿಯಲ್ಲಿ ಲಾಠಿಚಾರ್ಜ್ ಮಾಡಲಾಗಿದೆ ಅಂತಾ ಆಕ್ರೋಶ ಹೊರ ಹಾಕಿದರು. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಪೊಲೀಸ್ ಅಧಿಕಾರಿಗಳು ನಿಷ್ಪಕ್ಷಪಾತವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಪರಿಸ್ಥಿತಿ ಇದೆ. ದೇವದುರ್ಗ ಆಡಿಯೋ ಪ್ರಕರಣದ ಹಿನ್ನೆಲೆ ನಮ್ಮ ಪಕ್ಷದ ಯುವ ಮುಖಂಡ ಶರಣಗೌಡ ಕಂದಕೂರ ವಿರುದ್ಧ ದ್ವೇಷ ಸಾಧಿಸಲಾಗುತ್ತಿದೆ. ಆದರೆ ನಮ್ಮ ಹೋರಾಟ ಇಷ್ಟಕ್ಕೆ ಕೊನೆಯಾಗದು. ನಮ್ಮ ಪಕ್ಷದ ಯಾವುದೇ ಕಾರ್ಯಕರ್ತರ ವಿರುದ್ಧ ಈ ರೀತಿ ಹಗೆತನ ನಡೆದರೆ, ನಾನು ಸಹಿಸಲಾರೆ ಎಂದಿದ್ದಾರೆ.