Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

‘ಐಟಿ ರೇಡ್ ಮಾಡೋಕ್ಕೆ ಕಾಂಗ್ರೆಸ್ಸಿಗರೇ ಸಿಕ್ತಾರಾ..? ಬಿಜೆಪಿಯವರೇನು ಭಿಕಾರಿಗಳಾಗಿದ್ದಾರಾ..?’

Blog-post Thumbnail

ಹಾಸನ: ಇಂದು ಮಾಜಿ ಸಿಎಂ ಕುಮಾರಸ್ವಾಮಿ ದಂಪತಿ ಸಮೇತ ಹಾಸನಾಂಬೆ ದೇವಿಯ ದರ್ಶನ ಪಡೆಯಲು ಹಾಸನಕ್ಕೆ ಆಗಮಿಸಿದ್ರು. ದೇವಿಯ ದರ್ಶನ ಪಡೆಯುವ ಮೊದಲು ಸುದ್ದಿಗೋಷ್ಟಿ ನಡೆಸಿದ ಕುಮಾರಸ್ವಾಮಿ ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ದ ವಾಗ್ದಾಳಿ ನಡೆಸಿದ್ರು. ನರೇಂದ್ರ ಮೋದಿಯವರಿಗೆ ಚುನಾವಣೆ ಬಂದಾಗ ಮಾತ್ರ ಕರ್ನಾಟಕ ನೆನಪಾಗುತ್ತೆ, ನೆರೆ ಹಾವಾಳಿಯಿಂದ ಉತ್ತರ ಕರ್ನಾಟಕದ ರೈತರು ಮಳೆಯಿಂದ ಸಾಯುತ್ತಿದ್ದಾರೆ. ಆದರೆ ಆತ್ಮ ಸ್ಥೈರ್ಯ ಹೇಳುವುದಕ್ಕೆ ಯಾರು ಬಂದಿಲ್ಲ . ಜೊತೆಗೆ ಚುನಾವಣೆ ಬಂದಾಗ ಕೇಂದ್ರ ಸರ್ಕಾರದವರು ಮಿಲಿಟರಿ ಬಳಸಿ ಸರ್ಜಿಕಲ್ ಸ್ರ್ಟೈಕ್ ಮಾಡಿಸಿ ಓಟ್ ಮಾಡಿಸಿಕೊಳ್ಳುತ್ತಿದ್ದಾರೆ. ಅದೆಷ್ಟು ದಿನ ಕಾಶ್ಮೀರದಲ್ಲಿ ಮಿಲಿಟರಿ ಬಳಸುತ್ತಾರೋ ನೋಡೋಣ. ಕಾಶ್ಮೀರದಲ್ಲಿ ಬೇಕಾಗಿರುವುದು ಶಾಂತಿ ಸುವ್ಯವಸ್ಥೆ ಎಂದು ಗುಡುಗಿದ್ರು. ಇನ್ನು ಮೈತ್ರಿ ಸರ್ಕಾರದಲ್ಲಿ ಕುಮಾರಸ್ವಾಮಿಯವರು ಹಣ ಲೂಟಿ ಮಾಡಿದ್ದಾರೆ ಎಂದು ಆರೋಪ ಮಾಡಿದ್ದಾರೆ, ಆದರೆ ಈಗ ಅವರದ್ದೇ ಸರ್ಕಾರವಿದೆ ತನಿಖೆ ಮಾಡಿಸಲಿ. ಐಟಿ ರೇಡ್ ಮಾಡಲಿಕ್ಕೆ ಕಾಂಗ್ರೆಸ್ನವರು ಮಾತ್ರ ಸಿಕ್ಕುತ್ತಾರಾ..? ಬಿಜೆಪಿಯವರು ಭಿಕಾರಿಗಳಾಗಿದ್ದಾರಾ ಎಂದು ಹಾಸನದಲ್ಲಿ ವಾಗ್ದಾಳಿ ಮಾಡಿದ್ರು.