Loading...
mysqli_result Object ( [current_field] => 0 [field_count] => 5 [lengths] => [num_rows] => 1 [type] => 0 )

‘ನಮ್ಮ ಕಾರ್ಯಕರ್ತರ ಸುದ್ದಿಗೆ ಬಂದ್ರೆ ಸುಮ್ಮನಿರಲ್ಲ. ಆ ಜಾಯಮಾನವೂ ನನ್ನದಲ್ಲ’

Blog-post Thumbnail

ಬೆಂಗಳೂರು: ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಪುರಸಭೆ, ನಗರಸಭೆ, ನಗರಪಾಲಿಕೆಗಳಿಗೆ ಚುನಾವಣೆ ಘೋಷಣೆಯಾಗಿದೆ. ಒಟ್ಟು 418 ಸೀಟುಗಳಿಗೆ ಚುನಾವಣೆಯಾಗಲಿದೆ. ಮಂಗಳೂರಿನಲ್ಲಿ ಎಲ್ಲಾ ಕಡೆ ನಾವು ಪ್ರತಿನಿಧಿಸುತ್ತೇವೆ ಎಂದು ಹೇಳಿದರು. ಮಂಗಳೂರಿನಲ್ಲಿ ಒಬ್ಬರು ಮುಸ್ಲಿಂ ಕಾರ್ಪೋರೇಟರ್ ಇದ್ದಾರೆ. 3-4 ಕಡೆ ನಾವು ಗೆಲ್ಲುವ ಸಾಧ್ಯತೆ ಇದೆ. ಈ ಬಗ್ಗೆ ಫಾರೂಕ್ ಹತ್ರ ಕೂಡ ಚರ್ಚೆ ಮಾಡಿದ್ದೇನೆ. ಮಂಗಳೂರಿನಲ್ಲಿ ನಾನೇ ಹೋಗಿ ಪ್ರಚಾರ ಮಾಡ್ತೇನೆ. ನಾನು ಅಲ್ಲಿ ಹೆಚ್ಚಾಗಿ ಹೋಗದ ಕಾರಣ ಜೆಡಿಎಸ್ ಮಂಗಳೂರಿನಲ್ಲಿ ಹಿಂದೆ ಬಿದ್ದಿದೆ ಎಂದು ದೇವೇಗೌಡರು ಹೇಳಿದ್ದಾರೆ. ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯಿತಿ ಖಾಲಿ ಇರುವ ಕಡೆ ಸ್ಪರ್ಧೆ ಮಾಡ್ತೇವೆ. ಮಂಗಳೂರು ಬಿಟ್ಟು ಬಹುತೇಕ ಎಲ್ಲಾ ಕಡೆ ಸ್ಪರ್ಧೆ ಮಾಡ್ತೇವೆ. ದಾವಣಗೆರೆಯಲ್ಲಿ ಸಂಪೂರ್ಣವಾಗಿ ನಮಗೆ ಬಲ ಇದೆ ಎಂದು ಹೇಳೊಲ್ಲ. ಅಲ್ಲಿನ ಮುಖಂಡರು, ಶಿವಶಂಕರ್ ಜೊತೆ ಮಾತನಾಡಿ ಸ್ಪರ್ಧೆ ಮಾಡ್ತೇವೆ. ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಯಾರೊಂದಿಗೂ ಮೈತ್ರಿ ಇಲ್ಲ. ಸ್ವಂತತ್ರವಾಗಿ ಸ್ಪರ್ಧೆ ಮಾಡ್ತೇವೆ ಎಂದು ಹೆಚ್ಡಿಡಿ ಸ್ಪಷ್ಟನೆ ನೀಡಿದ್ದಾರೆ. ಇನ್ನು ಯಾದಗಿರಿಯಲ್ಲಿ ಜೆಡಿಎಸ್ ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆದ ಪ್ರಕರಣದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ದೇವೇಗೌಡರು, ಯಾದಗಿರಿಯಲ್ಲಿ ನಮ್ಮ ಕಾರ್ಯಕರ್ತರ ಮೇಲೆ ಪೋಲಿಸರು ದೌರ್ಜನ್ಯ ನಡೆಸಿದ್ದಾರೆ. ಸಿಎಂ ಕಾರಿಗೆ ಮುತ್ತಿಗೆ ಹಾಕಿದ್ದಾರೆ ಎಂದು ಪೋಲಿಸರು ಪ್ರಕರಣ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ. ಇದನ್ನು ಖಂಡಿಸಿ ಅಲ್ಲಿ ಪ್ರತಿಭಟನೆ ನಡೆಸ್ತಿದ್ದಾರೆ. ಆ ಪ್ರತಿಭಟನೆಯಲ್ಲಿ ಪಾಲ್ಗೊಳ್ತೇನೆ ಎಂದು ಹೇಳಿದ್ದಾರೆ. ಅಲ್ಲದೇ, ನನ್ನ ಕಾರ್ಯಕರ್ತರಿಗೆ ಎಲ್ಲೇ ತೊಂದರೆಯಾದ್ರೆ ನಾನು ಸುಮ್ಮನಿರಲ್ಲ. ಸುಮ್ಮನೆ ಇರೋ ಜಾಯಮಾನ ನನ್ನದು ಅಲ್ಲ ಎಂದಿದ್ದಾರೆ. ಕುಮಾರಸ್ವಾಮಿ ಕಾಲದಲ್ಲಿ ನೀಡಿದ್ದ ಅನುದಾನಕ್ಕೆ ಬಿಎಸ್ ವೈ ತಡೆ ನೀಡಿದ್ದರು. ನಾಗನಗೌಡ ಕಂದಕೂರು ಕ್ಷೇತ್ರದಲ್ಲಿ ಅನುದಾನ ತಡೆಹಿಡಿದಿದ್ದರಿಂದ ಅವರು ಕಾರು ತಡೆದು ಪ್ರತಿಭಟನೆ ನಡೆಸುತ್ತಿದ್ರು. ಅವರ ಮೇಲೆ ಹಲವು ಮೊಕದ್ದಮೆ ದಾಖಲಿಸಿದ್ದಾರೆ. ನಮ್ಮ ಕಾರ್ಯಕರ್ತನಿಗೆ ಹಿಂಸೆ ನೀಡುತ್ತಿದ್ದಾರೆ. ಡಿಜಿಪಿ ಅವರಿಗೆ ಮಾತಾಡಿದ್ದೇನೆ. ಅವರು ಕಾರ್ಯಕರ್ತರ ಮೇಲೆ ದೌರ್ಜನ್ಯ ನಡೆಸಿದವರನ್ನು ಸಸ್ಪೆಂಡ್ ಮಾಡ್ತೀನಿ ಎಂದು ಹೇಳಿದ್ರು. ಕುಮಾರಸ್ವಾಮಿ ಅವರು ಸಹ ಮಾತನಾಡಿದ್ರು, ಪೋಲಿಸರನ್ನು ಸಸ್ಪೆಂಡ್ ಮಾಡ್ತೀವಿ ಎಂದು ಹೇಳಿದ್ರು. ಆ ನಂತರ ಒತ್ತಡ ಬಂದಿರಬೇಕು. ಹೀಗಾಗಿ ಅವರು ಏನು ಕ್ರಮ ಕೈಗೊಂಡಿಲ್ಲ. ಯಾರ ಒತ್ತಡ ಎಂದು ನಾನು ಹೇಳೊದಿಲ್ಲ. ಹೀಗಾಗಿ ನಾನು ನಾಳೆ ಅಲ್ಲಿ ಹೋಗಿ ನೋಡಿ ಆಮೇಲೆ ಮಾತಾಡ್ತೀನಿ. ನನ್ನ ಕಾರ್ಯಕರ್ತರಿ